ಕಳ್ಳತನಕ್ಕಾಗಿ ಮನೆಗೆ ನುಗ್ಗಿದವನು ಕೊನೆಗೆ ಮನೆಯವರಿಗೆ ಹಣ ಇಟ್ಟು ಹೋದ.. Viral Story ಇಲ್ಲಿದೆ ನೋಡಿ
ಸಾಮಾನ್ಯವಾಗಿ ಕಳ್ಳರು (Thieves) ಯಾವುದೇ ಮನೆಗೆ ನುಗ್ಗಿದ್ದರೂ ಅವರು ಒಂದು ರೂಪಾಯಿ (Money) ಬಿಡದಂತೆ ಮತ್ತು ಕೈಗೆ ಸಿಕ್ಕಿದ್ದೆಲ್ಲವನ್ನೂ ಎತ್ತಿಕೊಂಡು ತಮ್ಮ ಬ್ಯಾಗಿಗೆ ಹಾಕಿಕೊಂಡು ಓಡಿ ಹೋಗುತ್ತಾರೆ. ಸ್ಥಳದಲ್ಲಿ ಕಳ್ಳತನದ (Theft) ಯಾವುದೇ ಸುಳಿವು ಸಹ ಬಿಡದಂತೆ ಜಾಗೃತಿಯನ್ನು ವಹಿಸುತ್ತಾರೆ. ಆದರೆ ಇಲ್ಲಿ ನಡೆದಿರುವ ಘಟನೆಯನ್ನು ನೀವು ಕೇಳಿದರೆ, ಇವನೆಂಥಾ ಕಳ್ಳ ಇರಬಹುದು ಅಂತ ನೀವು ಆಶ್ಚರ್ಯ ಪಡಬಹುದು. ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿ ನಡೆದ ಒಂದು ವಿಚಿತ್ರ ಘಟನೆಯಲ್ಲಿ, ಶಸ್ತ್ರಸಜ್ಜಿತ ಕಳ್ಳನು ಮನೆಯನ್ನು ಪೂರ್ತಿಯಾಗಿ ದೋಚಿಕೊಂಡು ಆ ಸ್ಥಳದಿಂದ ಪಲಾಯನ ಮಾಡುವ ಮೊದಲು ಮನೆ ಮಾಲೀಕರ ಕೈಗೆ ಸಿಕ್ಕಿಬಿದ್ದು 200 ಡಾಲರ್ ಹಣವನ್ನು ಎಂದರೆ ಅದು ಭಾರತೀಯ ಮೌಲ್ಯದಲ್ಲಿ ಸುಮಾರು 15,000 ರೂಪಾಯಿಯನ್ನು ಹಾಗೆಯೇ ಮನೆಯಲ್ಲಿಯೇ ಬಿಟ್ಟು ಹೋಗಿದ್ದಾನೆ.
ಕಿಟಕಿ ರಿಪೇರಿ ಹಣ ಬಿಟ್ಟು ಹೋಗಿರುವ ಕಳ್ಳ
ಆ ಮನೆಗೆ ನುಗ್ಗಿದ್ದ ಕಳ್ಳನ ಬಳಿ ಎಆರ್-15 ರೈಫಲ್ ಹೊಂದಿದ್ದನು. ಆದರೆ ಮನೆಯ ಮಾಲೀಕರಿಗೆ ಯಾವುದೇ ವಸ್ತುಗಳ ಬೆದರಿಕೆ ಹಾಕಲಿಲ್ಲ ಅಥವಾ ಕದಿಯಲಿಲ್ಲ ಎಂದು ಸುದ್ದಿ ಮಾಧ್ಯಮವು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಸಂಭವನೀಯ ಕಾರಣದ ಹೇಳಿಕೆಯಲ್ಲಿ ಸೂಚಿಸುತ್ತದೆ. ಯಾವುದೇ ಹಿಂಸಾಚಾರಕ್ಕೆ ಕಾರಣವಾಗುವ ಬದಲು, ಕಳ್ಳನು ಮನೆಯ ಒಳಗೆ ನುಗ್ಗಿದ್ದಕ್ಕಾಗಿ ಮಾಲೀಕರಲ್ಲಿ ಕ್ಷಮೆ ಯಾಚಿಸಿದನು. ಹೇಳಿಕೆಯ ಪ್ರಕಾರ, ಅವರು ರಾತ್ರಿಗೆ ಉಳಿದುಕೊಳ್ಳಲು ಒಂದು ಬೆಚ್ಚಗಿನ ಸ್ಥಳದ ಅಗತ್ಯವಿತ್ತು, ಹಾಗಾಗಿ ಈ ಮನೆಯಲ್ಲಿ ನುಗ್ಗಿದ್ದೇನೆ ಎಂದು ಹೇಳಿದರು. ನಂತರ ತಾನು ಮನೆಯ ಒಳಗೆ ಬರಲು ಮುರಿದಿದ್ದ ಕಿಟಕಿಯನ್ನು ರಿಪೇರಿ ಮಾಡಿಸಿಕೊಳ್ಳಲು 200 ಡಾಲರ್ ಹಣವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸುದ್ದಿ ಮಾಧ್ಯಮದ ಪ್ರಕಾರ, ಮನೆಯ ಮಾಲೀಕರು ಕಳ್ಳನು ಕಿಟಕಿ ಮುರಿದು ಒಳಬರಲು ಪ್ರಯತ್ನಿಸಿದಾಗ ಆ ಕಿಟಕಿ ಮುರಿದಿದ್ದು, ಆ ಹಾನಿಯನ್ನು ಸುಮಾರು 200 ಡಾಲರ್ ಎಂದು ಅಂದಾಜಿಸಿದ್ದಾರೆ. ಕಳ್ಳನು ತನ್ನ ರೈಫಲ್ ಮತ್ತು ಡಫಲ್ ಚೀಲದೊಂದಿಗೆ ಮನೆಯಿಂದ ಹೊರಟಿದ್ದಾನೆ ಎಂದು ವರದಿ ಹೇಳಿದೆ. ಹೊರಡುವ ಮೊದಲು, ಅವರು ತಮ್ಮ ಕಥೆಯನ್ನು ಕುಟುಂಬದೊಂದಿಗೆ ಹಂಚಿಕೊಂಡಿದ್ದರು. ಅಲ್ಬುಕರ್ಕ್ ಜರ್ನಲ್ ಉಲ್ಲೇಖಿಸಿದ ಸಾಂಟಾ ಫೆ ಕೌಂಟಿ ಶೆರಿಫ್ ಕಚೇರಿ ಪೊಲೀಸ್ ವರದಿಯ ಪ್ರಕಾರ, ಮಾಲೀಕರು ಆ ವ್ಯಕ್ತಿಯನ್ನು ಮನೆಯಲ್ಲಿ ಕಳ್ಳತನ ಮಾಡಲು ಏಕೆ ಬಂದಿದ್ದೀರಿ ಎಂದು ಕೇಳಿದಾಗ, ಅವನು ತನ್ನ ಕುಟುಂಬವನ್ನು ಪೂರ್ವ ಟೆಕ್ಸಾಸ್‌ನಲ್ಲಿ ಕೊಲ್ಲಲಾಗಿದೆ ಮತ್ತು ಅವನು ಯಾರಿಂದಾನೋ ತಪ್ಪಿಸಿಕೊಳ್ಳಲು ಮತ್ತು ಆತನ ಕಾರು ಪಟ್ಟಣದ ಹೊರವಲಯದಲ್ಲಿ ಕೆಟ್ಟು ನಿಂತಿದೆ ಎಂದು ಹೇಳಿದನು.
ಮರುದಿನ, ಕಳ್ಳನ ವರ್ಣನೆಯನ್ನು ಹೋಲುವ ಒಬ್ಬ ವ್ಯಕ್ತಿಯು ರೆಸ್ಟೋರೆಂಟ್‌ನ ಡ್ರೈವ್-ಥ್ರೂನಲ್ಲಿ ಮಹಿಳೆಯ ಬಳಿಗೆ ಹೋಗಿದ್ದನು, ಕಾರಿನಿಂದ ಇಳಿಯಲು ಅವಳನ್ನು ಕೇಳಿದನು ಮತ್ತು ಅವಳಿಂದ ಕಾರನ್ನು ತೆಗೆದುಕೊಳ್ಳುವುದಾಗಿ ಹೇಳಿಕೊಂಡನು. ಮಹಿಳೆ ಹಾರ್ನ್ ಮಾಡಲು ಪ್ರಾರಂಭಿಸಿದಾಗ, ಆ ವ್ಯಕ್ತಿಯು ಆ ಸ್ಥಳದಿಂದ ಓಡಿ ಹೋದನು. ನಂತರ ಪೊಲೀಸರು ಆ ಕಳ್ಳನು ಪಟ್ಟಣದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ಅವನನ್ನು ವಶಕ್ಕೆ ತೆಗೆದುಕೊಂಡರು. ಹಿಮಮಾರುತದಿಂದ ತನ್ನನ್ನು ರಕ್ಷಿಸಿಕೊಳ್ಳಲು ಭಾನುವಾರ ಮನೆಗೆ ನುಗ್ಗಿದ್ದಾಗಿ ಅವನು ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡನು. ಅವನು ತಾನು ಕದ್ದ ಹಣದಲ್ಲಿ 200 ಡಾಲರ್ ರೂಪಾಯಿಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ನಂತರ ಪೊಲೀಸರು ಈತನನ್ನು ಜೈಲಿಗೆ ಹಾಕಿದರು ಮತ್ತು ಇವನ ವಿರುದ್ಧ ಕ್ರಿಮಿನಲ್ ಕೇಸ್ ಅನ್ನು ದಾಖಲಿಸಲಾಗಿದೆ.
No comments: