ಗ್ರಾಮ ಪಂಚಾಯ್ತಿ ಬದಲು ರೈತನ ಖಾತೆಗೆ 15 ಲಕ್ಷ ಹಣ; PM ಹಾಕಿದ ದುಡ್ಡು ಎಂದು ಸುಮ್ಮನಾದ ಆದರೆ, ಆಗಿದ್ಧೇ ಬೇರೆ

ಅಭಿವೃದ್ಧಿ ಉದ್ದೇಶಗಳಿಗಾಗಿ ಪಿಂಪಲ್ವಾಡಿ ಗ್ರಾಮ ಪಂಚಾಯಿತಿಗೆ ಹಣವನ್ನು ಹಂಚಿಕೆ ಮಾಡಲಾಗಿತ್ತು ಆದರೆ ಬ್ಯಾಂಕ್ ಆಫ್ ಬರೋಡಾ ತಪ್ಪಾಗಿ ಜ್ಞಾನೇಶ್ವರ್ ಅವರ ಖಾತೆಗೆ ಮೊತ್ತವನ್ನು ಜಮಾ ಮಾಡಿ, ಈ ಎಡವಟ್ಟು ನಡೆಸಿದೆ.

ರೈತರೊಬ್ಬರ ಜನಧನ್ ಖಾತೆಗೆ (Jan Dhan Account)​ ಅಚಾನಕ್​ ಆಗಿ 15 ಲಕ್ಷ ಜಮೆ ಆಗಿದೆ. ರೈತ ಕೂಡ ಇಷ್ಟು ಮೊತ್ತದ ಹಣ ನೋಡಿ ಅಚ್ಚರಿ ವ್ಯಕ್ತಪಡಿಸಿದ. ಬಳಿಕ 2014ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಪ್ರತಿ ನಾಗರಿಕರ ಖಾತೆಗೆ 15 ಲಕ್ಷ ಹಣ ಜಮೆ ಮಾಡುವ ಭರವಸೆ ಅಂತೆ ಹಣ ಹಾಕಿದ್ದಾರೆ ಎಂದು ಸುಮ್ಮನಾದ. ಜೊತೆಗೆ ಇಷ್ಟು ದೊಡ್ಡ ಮೊತ್ತದ ಹಣ ಹಾಕಿದ್ದಕ್ಕೆ ಧನ್ಯವಾದ ಸಲ್ಲಿಸಿ ಅವರಿಗೆ ಪತ್ರವನ್ನು ಬರೆದ. ಆದರೆ, ಕಡೆಗೆ ಆಗಿದ್ದು ಮಾತ್ರ ಆತ ಊಹೆಗೆ ನಿಲುಕದಂತೆ.

ಮನೆ ಕಟ್ಟಿದ ಬಳಿಕ ಅಸಲಿ ವಿಷಯ ಬಹಿರಂಗ

ಅಚ್ಚರಿ ಆದರೂ ಹೌದು. ಔರಂಗಾಬಾದ್​ನ ಪೈಠಾಣ್​ ತಾಲೂಕಿನ ಜ್ಞಾನೇಶ್ವರ್​ ಓಟೆ ಅವರ ಜನಧನ್ ಖಾತೆಗೆ 15 ಲಕ್ಷ ಹಣ ಜಮೆ ಆಗಿದೆ. ಇಷ್ಟು ಮೊತ್ತದ ಹಣ ಆತ ಖಾತೆಯಲ್ಲಿ ಕಂಡಾಕ್ಷಣ ಅಚ್ಚರಿಗೊಂಡು ಕೆಲ ತಿಂಗಳು ಕಾಲ ಸುಮ್ಮನಿದ್ದ. ಬಳಿಕವೂ ಖಾತೆಯಲ್ಲಿ ಹಣ ಇರುವುದರಿಂದ ಅನುಮಾನಗೊಂಡು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾನೆ. ಈ ವೇಳೆ ಆ ಕಡೆಯಿಂದಲೂ ಯಾವುದೇ ಸರಿಯಾದ ಮಾಹಿತಿ ಸಿಕ್ಕಿಲ್ಲ. ಕಡೆಗೆ ಆತ ಈ ಹಣವನ್ನು ತನ್ನ ಕನಸಿನ ಮನೆ ನಿರ್ಮಾಣ ಮಾಡಲು ಬಳಸಲು ಮುಂದಾಗಿದ್ದಾರೆ. ಮೊದಲಿಗೆ 15 ಲಕ್ಷ ಹಣದಲ್ಲಿ ಮನೆಯನ್ನು ನಿರ್ಮಿಸಿದ್ದಾನೆ. ಇದೆಲ್ಲಾ ನಡೆದ ಆರು ತಿಂಗಳ ಬಳಿಕ ಬ್ಯಾಂಕ್​ ಅಧಿಕಾರಿಗಳು ರೈತನ ಖಾತೆಗೆ ತಪ್ಪಾಗಿ ಹಣ ವರ್ಗಾವಣೆ ಮಾಡಿರುವುದು ಅರಿತಿದ್ದಾರೆ.

ಗ್ರಾಮ ಪಂಚಾಯ್ತಿ ಖಾತೆ ಬದಲು ರೈತನ ಖಾತೆಗೆ ಹಣ

ಕೂಡಲೇ ಆತನ ಸಂಪರ್ಕ ನಡೆಸಿ, ಖಾತೆಗೆ ತಪ್ಪಾಗಿ ದೊಡ್ಡ ಮೊತ್ತದ ಹಣ ಜಮೆ ಆಗಿದೆ, ಈ ಹಿನ್ನಲೆ ಪೂರ್ಣ ಮೊತ್ತವನ್ನು ಹಿಂದಿರುಗಿಸಬೇಕು ಎಂದು ಬ್ಯಾಂಕ್​ ಅಧಿಕಾರಿಗಳು ನೋಟಿಸ್​ ನೀಡಿದ್ದಾರೆ. ಈ ನೋಟಿಸ್ ನೋಡುತ್ತಿದ್ದಂತೆ ರೈತ ಅವಕ್ಕಾಗಿದ್ದಾನೆ.

ಅಭಿವೃದ್ಧಿ ಉದ್ದೇಶಗಳಿಗಾಗಿ ಪಿಂಪಲ್ವಾಡಿ ಗ್ರಾಮ ಪಂಚಾಯಿತಿಗೆ ಹಣವನ್ನು ಹಂಚಿಕೆ ಮಾಡಲಾಗಿತ್ತು ಆದರೆ ಬ್ಯಾಂಕ್ ಆಫ್ ಬರೋಡಾ ತಪ್ಪಾಗಿ ಜ್ಞಾನೇಶ್ವರ್ ಅವರ ಖಾತೆಗೆ ಮೊತ್ತವನ್ನು ಜಮಾ ಮಾಡಿ, ಈ ಎಡವಟ್ಟು ನಡೆಸಿದೆ.

ಬ್ಯಾಂಕ್​ ಅಧಿಕಾರಿಗಳ ನೋಟಿಸ್​ ಹಿನ್ನಲೆ ಇದೀಗ ರೈತ ಬ್ಯಾಂಕ್​ಗೆ 15 ಲಕ್ಷ ಮೊತ್ತ ಹಿಂದಿರುಗಿಸಬೇಕಾಗಿದೆ. ಒ್ರಧಾನಿ ಮೋದಿ ಅವರು ತನ್ನ ಖಾತೆಗೆ ಹಣ ಜಮೆ ಮಾಡಿದ್ದಾರೆ ಎಂದು ನಾನು ಬಳಸಿದೆ. ಆದರೆ, ಇದೀಗ ಅಧಿಕಾರಿಗಳು ಇದು ತಪ್ಪಾಗಿ ಜಮೆಯಾದ ಮೊತ್ತ ಎಂದಿದ್ದಾರೆ. 15ರಲ್ಲಿ 6 ಲಕ್ಷ ರೂ ಅನ್ನು ಬ್ಯಾಂಕ್​ಗೆ ನೀಡಲಾಗಿದ್ದು, ಇನ್ನು 9 ಲಕ್ಷ ಹಣವನ್ನು ಬ್ಯಾಂಕ್​ ಆಫ್​ ಬರೋಡಗೆ ಹಿಂದಿರುಗಿಸಬೇಕಾಗಿದೆ ಎಂದಿದ್ದಾರೆ.

ಈ ರೀತಿ ಪ್ರಕರಣಗಳು ಇದೇ ಮೊದಲು ಅಲ್ಲ

ಈ ರೀತಿ ಜನ ಸಾಮಾನ್ಯರ ಖಾತೆಗೆ ತಪ್ಪಾಗಿ ಹಣ ಜಮೆ ಆದ ಮೊದಲ ಪ್ರಕರಣ ಇದು ಅಲ್ಲ. ಈ ಹಿಂದೆ ಕೂಡ ಈ ರೀತಿ ಅನೇಕ ಘಟನೆ ನಡಎದಿದೆ, ಕಳೆದ ವರ್ಷದ ಆರಂಭದಲ್ಲಿ, ಬಿಹಾರದ ಮುಜಾಫರ್‌ಪುರದ ರೈತ ರಾಮ್ ಬಹದ್ದೂರ್ ಶಾ ತನ್ನ ಬ್ಯಾಂಕ್ ಖಾತೆಗೆ 52 ಕೋಟಿ ರೂ. ಜಮೆ ಆಗಿತ್ತು. ಕತಿಹಾರದ 6ನೇ ತರಗತಿಯ ಇಬ್ಬರು ಶಾಲಾ ವಿದ್ಯಾರ್ಥಿಗಳ ಖಾತೆಗೂ ಹಣ ಜಮೆ ಆಗಿ ಲಕ್ಷಾಧಿಪತಿಗಳಾದರು. ಆದರೆ ಇದು ತಾಂತ್ರಿಕ ದೋಷ ಎಂದು ಕತಿಹಾರ್ ಡಿಎಂ ಉದಯನ್ ಮಿಶ್ರಾ ಹೇಳಿದ್ದಾರೆ .

ಖಗಾರಿಯಾ ಜಿಲ್ಲೆಯ ರಂಜಿತ್ ದಾಸ್ ಎಂಬ ವ್ಯಕ್ತಿಯೂ ಬ್ಯಾಂಕ್ ಖಾತೆಯಲ್ಲಿ 5.5 ಲಕ್ಷ ರೂ. ಮೊತ್ತ ಜಮೆ ಆಗಿತ್ತು. ಇದು ತಪ್ಪಾಗಿ ಜಮೆ ಆಗಿದೆ ಎಂದು ಬ್ಯಾಂಕ್​ ಅಧಿಕಾರಿಗಳು ಹೇಳಿದರೂ ರಂಜಿತ್​ ದಾಸ್​, ಇದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರತಿಯೊಬ್ಬರಿಗೂ 15 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಈಗ ನನ್ನ ಖಾತೆಗೆ ಮೊದಲ ಕಂತು ಹಣ ಬಂದಿದೆ. ಇದನ್ನು ನಾನು ಹಿಂದಿರುಗಿಸುವುದಿಲ್ಲ ಎಂದು ಹಠ ಹಿಡಿದರು. ಕಡೆಗೆ ದಿಕ್ಕು ತೋಚದ ಬ್ಯಾಂಕ್​ ಸಿಬ್ಬಂದಿ ಎಫ್​ಐಆರ್​ ದಾಖಲಿಸಿದರು. ಸದ್ಯ ರಂಜಿತ ದಾಸ್​ ಜೈಲಿನಲ್ಲಿದ್ದಾರೆ.

No comments:

Powered by Blogger.
google.com, pub-6640921760405904, DIRECT, f08c47fec0942fa0