ರೈಲು ದುರಂತದ ಬಳಿಕ ಹಲವು ಪ್ರಶ್ನೆಗಳು ಉದ್ಭವ: ಅಪಘಾತಕ್ಕೆ ತಾಂತ್ರಿಕ ದೋಷನಾ? ಮಾನವ ನಿರ್ಮಿತನಾ?
ಭುವನೇಶ್ವರ(ಜೂ.06): ನಿನ್ನೆ ಸಂಜೆ ಒಡಿಶಾದಲ್ಲಿ ಮೂರು ರೈಲುಗಳ ಅಪಘಾತದ (Odisha Train Accident) ನಂತರ, ಇದುವರೆಗೆ 288 ಜನರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಪಾತ್ರ ವಹಿಸಿರಬಹುದಾದ ಈ ಘಟನೆಗೆ ಸಂಬಂಧಿಸಿದಂತೆ ಹಲವು ಸಂಭಾವ್ಯ ಪ್ರಶ್ನೆಗಳು ಎದ್ದಿವೆ. ಶುಕ್ರವಾರ ಸಂಜೆ 6.50 ರಿಂದ 7.10 ರ ನಡುವೆ, ಒಡಿಶಾದ (Odisha) ಬಾಲಸೋರ್‌ನಲ್ಲಿ ಮೂರು ರೈಲುಗಳ ನಡುವೆ ಎರಡು ಘರ್ಷಣೆಗಳು ಸಂಭವಿಸಿವೆ, ಇದರಿಂದಾಗಿ ಹಲವಾರು ಬೋಗಿಗಳು ಒಂದರ ಮೇಲೊಂದು ಬಂದವು.

No comments: