ಶಿಕ್ಷಕನಿಂದ ಗರ್ಭವತಿಯರಾದ 8 ವಿದ್ಯಾರ್ಥಿನಿಯರು

ಶಿಕ್ಷಕನಿಂದ ಗರ್ಭವತಿಯರಾದ 8 ವಿದ್ಯಾರ್ಥಿನಿಯರು: 
ಅಪ್ತಾಪ್ತ ಬಾಲಕಿಯರ ಮೇಲೆ ಅತ್ಯಾಚಾರ (Rape) ನಡೆಯುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಬಹಳಷ್ಟು ಪ್ರಕರಣಗಳಲ್ಲಿ ಹೆಣ್ಣು ಮಗು ಹೊಟ್ಟೆ ನೋವೆಂದು ವೈದ್ಯರ ಬಳಿ ಹೋದಾಗಲೇ ಗರ್ಭಿಣಿಯಾಗುವುದು (Pregnant) ಬಯಲಾಗುತ್ತದೆ. ನೆರೆ ಮನೆಯ ವ್ಯಕ್ತಿ, ಶಾಪ್ಕೀಪರ್, ಸಂಬಂಧಿ ಹೀಗೆ ಬಹಳಷ್ಟು ಸಲ ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಯುತ್ತದೆ. ಇವುಗಳಲ್ಲಿ ಎಷ್ಟೋ ಪ್ರಕರಣಗಳು ಗೊತ್ತೇ ಆಗದೆ ಮುಗಿದು ಹೋಗುತ್ತವೆ. ಇಲ್ಲೊಂದು ಕಡೆ ಪಾಠ ಹೇಳುವ ಶಿಕ್ಷಕನೇ (Teacher) ವಿದ್ಯಾರ್ಥಿನಿಯರ ಮೇಲೆ ಮೃಗವಾಗಿ ಎರಗಿದ್ದಾನೆ. ಶಾಲೆಗೆ ಬಂದ ಪುಟ್ಟ ಹೆಣ್ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅವರು ತಮ್ಮ 36 ವರ್ಷದ ಶಿಕ್ಷಕರಾಗಿದ್ದರು, ಬೋರ್ಡಿಂಗ್ ಶಾಲೆಯಲ್ಲಿ (Boarding School) ಮಕ್ಕಳ ಶಿಕ್ಷಣ ನೋಡಿಕೊಂಡು, ಅವರಿಗೆ ಬೆಂಬಲ ನೀಡಿ ಮುಖ್ಯವಾಗಿ ಅವರನ್ನು ರಕ್ಷಿಸುವ ಸ್ಥಾನದಲ್ಲಿದ್ದರು. ಆ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದ 36 ವರ್ಷದ ಶಿಕ್ಷಕ ತಾನೇ ರಕ್ಷಕನಿಂದ ಭಕ್ಷಕನಾಗಿ ಬದಲಾಗಿದ್ದಾನೆ. ತನ್ನ ಬಳಿ ರಕ್ಷಣೆಗೆ ಬಿಟ್ಟ ಹೆಣ್ಮಕ್ಕಳ ಮೇಲೆ ತಾನೇ ಎರಗಿದ್ದಾನೆ.

No comments:

Powered by Blogger.
google.com, pub-6640921760405904, DIRECT, f08c47fec0942fa0