ಲಕ್ಷದ್ವೀಪ ಜನತೆಯೊಂದಿಗೆ ನಾವು: SKSSF ಮಿತ್ತಬೈಲ್ ಕ್ಲಸ್ಟರ್ .
ಬಂಟ್ವಾಳ, ಮೇ.31: ಲಕ್ಷದ್ವೀಪದಲ್ಲಿ ನಡೆಯುತ್ತಿರುವ ಅನ್ಯಾಯ, ದಬ್ಬಾಳಿಕೆ ವಿರುದ್ಧ, ದ್ವೀಪದ ಜನತೆಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ SKSSF ಮಿತ್ತಬೈಲು ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಖಾ ಮಟ್ಟದಲ್ಲಿ ಪೋಸ್ಟರ್ ಪ್ರದರ್ಶನ ನಡೆಸಲಾಯಿತು.
ಶಾಂತಿಯುತವಾಗಿ ಬದುಕು ನಡೆಸುತ್ತಿದ್ದವರ ನಡುವೆ ಕರಾಳ ಕಾನೂನು ಹೇರುತ್ತಿರುವ ಕೇಂದ್ರ ಸರ್ಕಾರವು, ಹೊಸ ಕಾನೂನುಗಳನ್ನು ಹಿಂದಕ್ಕೆ ಪಡೆಯಲಿ, ದ್ವೀಪದ ಜನತೆಯ ವಿರುದ್ಧ ಸಾಗುತ್ತಿರುವ ರಾಜಕಾರಣಿ ಆಡಳಿತಾಧಿಕಾರಿಯನ್ನು ಹಿಂದಕ್ಕೆ ಕರೆಸಲಿ ಎಂದು ಎಸ್ಕೆಎಸ್ಎಸ್ಎಫ್ ಬಂಟ್ವಾಳ ವಲಯ ಅಧ್ಯಕ್ಷರಾದ ಇರ್ಷಾದ್ ದಾರಿಮಿ ಅಲ್-ಜಝ್ಹರಿ ಹೇಳಿದರು.
ಅವರು ಮಿತ್ತಬೈಲು ಕ್ಲಸ್ಟರ್ ಏರ್ಪಡಿಸಿದ ಪೋಸ್ಟರ್ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತುದ್ದರು. ಮಿತ್ತಬೈಲು ಕ್ಲಸ್ಟರ್ ಸಮಿತಿಯು ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಪೋಸ್ಟರ್ ಪ್ರದರ್ಶನ ಏರ್ಪಡಿಸಿತ್ತು.
ಶೇ.98 ರಷ್ಟು ಮುಸ್ಲಿಂ ಬಾಹುಳ್ಯವಿರುವ ಸುಮಾರು 38 ರಷ್ಟು ದ್ವೀಪಗಳಿದ್ದು, ಕೇವಲ 10 ದ್ವೀಪಗಳಲ್ಲಿ ಮಾತ್ರ ಜನ ವಾಸವಿದೆ. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರಾಗಿದ್ದ ಶೈಖುನಾ ಮರ್ಹೂಂ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ರವರ ತವರು ಮಣ್ಣಾದ ಲಕ್ಷದ್ವೀಪವು ಇಂದು ಕೇಂದ್ರ ಸರ್ಕಾರದ ಕರಾಳ ಕಾನೂನಿನಿಂದ ತನ್ನ ವೈವಿಧ್ಯತೆಯನ್ನು ಕಳೆದುಕೊಳ್ಳುತ್ತಿದೆ.
ದಿಯು ದಾಮುನ್ ಪ್ರದೇಶದ ಆಡಳಿತಾಧಿಕಾರಿಯಾಗಿದ್ದ ಪ್ರಫುಲ್ ಖೋಡಾ ಪಟೇಲರನ್ನು ಲಕ್ಷದ್ವೀಪದ ನೂತನ ಆಡಳಿತಾಧಿಕಾರಿಯಾಗಿ ನೇಮಿಸಿದಂದಿನಿಂದ ದ್ವೀಪದಲ್ಲಿ ಸಮಸ್ಯೆಗಳು ಆರಂಭವಾಗಿವೆ.
ದಿನಗೂಲಿಯಲ್ಲಿ ಬದುಕುತ್ತಿರುವ ಪರಿಶಿಷ್ಟ ಜನರ ಮೇಲೆ, ಅಭಿವೃದ್ದಿಯ ಹೆಸರಿನ ಕರಾಳ ಫ್ಯಾಶಿಸಂ ನೀತಿಯನ್ನು ಹೇರಲಾಗುತ್ತಿದೆ. ಇಂತಹ ಕರಿ ನಿಯಮವನ್ನು ಎಸ್ಕೆಎಸ್ಎಸ್ಎಫ್ ಮಿತ್ತಬೈಲು ಕ್ಲಸ್ಟರ್ ಖಂಡಿಸುತ್ತದೆ ಎಂದು ಇರ್ಷಾದ್ ದಾರಿಮಿ ಹೇಳಿದರು.

ಇರ್ಷಾದ್ ದಾರಿಮಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಸ್ಕೆಎಸ್ಎಸ್ಎಫ್ ಮಿತ್ತಬೈಲ್ ಕ್ಲಸ್ಟರ್ ಅಧ್ಯಕ್ಷರಾದ ಅಶ್ರಫ್ ಶಾಂತಿಅಂಗಡಿ, ಪ್ರ.ಕಾರ್ಯದರ್ಶಿ ಶಾಕೀರ್ ಮಿತ್ತಬೈಲ್ ಹಾಗೂ ಮಿತ್ತಬೈಲ್ ಕ್ಲಸ್ಟರಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

No comments: