ವೃದ್ಧೆಗೆ ಆಹಾರ ಕೊಡುವ ಹೃದಯವಂತ ಪೊಲೀಸ್ : ಮನಸೆಳೆಯುವ ಫೋಟೋ ವೈರಲ್

 

ಪೊಲೀಸ್ ಅಧಿಕಾರಿಯೊಬ್ಬರು ವೃದ್ಧೆಗೆ ಆಹಾರ ತಿನಿಸುವ ಫೋಟೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ಎಲ್ಲರನ್ನೂ ಒಂದು ಕ್ಷಣ ಭಾವುಕರನ್ನಾಗಿಸುವಂತಿದೆ. ಸದ್ಯ ವಿವಿಧ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಫೋಟೋ ವೈರಲ್ ಆಗುತ್ತಿದೆ.


ಎಲ್ಲರನ್ನೂ ಪ್ರೀತಿಯಿಂದ ಕಂಡಾಗ ಜಗತ್ತೇ ಸುಂದರ... ಪ್ರತಿಯೊಬ್ಬರು ತಮ್ಮ ಸುತ್ತಮುತ್ತ ಇರುವವರನ್ನು ಪ್ರೀತಿ, ವಿಶ್ವಾಸದಿಂದ ಕಂಡರೆ ಸಮಾಜದಲ್ಲಿ ಇನ್ನಷ್ಟು ಖುಷಿ ನೆಲೆಗೊಳ್ಳುತ್ತದೆ. ಹೀಗೆ ಪರಸ್ಪರ ಪ್ರೀತಿ, ಸಹಾಯ ಮಾಡುತ್ತಿದ್ದರೆ ಬದುಕಿಗೊಂದು ಚೈತನ್ಯ ಸಿಗುತ್ತದೆ, ಜೀವನ ಇನ್ನಷ್ಟು ಖುಷಿಯಿಂದ ಕೂಡಿರುತ್ತದೆ.

ನಮ್ಮ ಬದುಕು ಎಂಬುದು ಬಲು ಚಿಕ್ಕದು. ಈ ಚಿಕ್ಕ ಬದುಕಿನಲ್ಲಿ ಎಷ್ಟು ಖುಷಿಯಿಂದ, ಪ್ರೀತಿಯಿಂದ, ಸಹಾಯ ಮಾಡುತ್ತಾ ಇರುತ್ತೇವೆ ಎಂಬುದೇ ಮುಖ್ಯ. ಹೀಗೆ ನಮ್ಮ ಬದುಕನ್ನು ಅತ್ಯಂತ ಪ್ರೀತಿಯಿಂದ ಕಂಡಾಗ ಜೀವನದ ಎಲ್ಲಾ ಕ್ಷಣವೂ ದೊಡ್ಡ ಖುಷಿಯ ಕ್ಷಣವಾಗಿ ಮಾರ್ಪಡುತ್ತದೆ. ಅಂತಹದ್ದೇ ಖುಷಿಯನ್ನು ಈಗ ಇಲ್ಲೊಬ್ಬರು ಪೊಲೀಸ್ ಅಧಿಕಾರಿ ಅನುಭವಿಸಿದ್ದಾರೆ.
ಇದು ಪೊಲೀಸ್ ಅಧಿಕಾರಿಯೊಬ್ಬರು ವೃದ್ಧೆಯೊಬ್ಬರಿಗೆ ತಾನೇ ತನ್ನ ಕೈಯಾರ ಆಹಾರ ತಿನಿಸುವ ಹೃದಯಸ್ಪರ್ಶಿ ದೃಶ್ಯ. ಉತ್ತರ ಪ್ರದೇಶದಲ್ಲಿ ಸೆರೆಯಾದ ಈ ದೃಶ್ಯ ಈಗ ಎಲ್ಲರ ಕಣ್ಣಾಲಿಗಳು ತುಂಬಿ ಬರುವಂತೆ ಮಾಡಿದೆ. ಪ್ಯಾರಾಲಿಂಪಿಯನ್ ರಿಂಕು ಹುಡಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಮಾನವೀಯ ಕಾರ್ಯದ ಫೋಟೋ ಇದು. ಸದ್ಯ ಈ ಫೋಟೋ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

No comments:

Powered by Blogger.
google.com, pub-6640921760405904, DIRECT, f08c47fec0942fa0