ಕರ್ನಾಟಕ: ವೀಕೆಂಡ್ ಕರ್ಫ್ಯೂ ರದ್ದು, ನೈಟ್ ಕರ್ಫ್ಯೂ ಮುಂದುವರಿಕೆ
ಬೆಂಗಳೂರು,
ಜ.21:ಮುಖ್ಯಮಂತ್ರಿಗಳು ಇಂದು ಸಚಿವರು ಮತ್ತು ಆರೋಗ್ಯ ಕ್ಷೇತ್ರದ ತಜ್ಞರ ಜೊತೆ ನಡೆಸಿದ ಸಭೆಯಲ್ಲಿ ಶನಿವಾರ ಮತ್ತು ಭಾನುವಾರದ ವೀಕೆಂಡ್ ಕರ್ಫ್ಯೂವನ್ನು ಹಿಂದಕ್ಕೆ ಪಡೆಯಲಾಗಿದೆ.
ಸಭೆಯ ನಂತರ ಮಾಧ್ಯಮ ಮಿತ್ರರ ಜೊತೆ ಮಾತನಾಡಿದ ಸಾರ್ವಜನಿಕರ ಬೇಡಿಕೆಯನ್ನು ಮನ್ನಿಸಿ ತಜ್ಞರ ಅಭಿಪ್ರಾಯದಂತೆ ವೀಕೆಂಡ್ ಕರ್ಫ್ಯೂವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ನೈಟ್ ಕರ್ಫ್ಯೂವನ್ನು ಮುಂದುವರಿಸಲಾಗಿದ್ದು, ಸಭೆ-ಸಮಾರಂಭಗಳಿಗೆ ಈಗಿನ ಮಾನದಂಡವನ್ನೇ ಮುಂದುವರಿಸಲಾಗಿದೆ. ಒಳಾಂಗಣ ಸಮಾರಂಭಕ್ಕೆ 100 ಹೊರಾಂಗಣ ಸಮಾರಂಭಕ್ಕೆ 200 ಮಂದಿಯನ್ನು ಸೀಮಿತಗೊಳಿಸಿ ಅಂತರ ಕಾಪಾಡಿಕೊಂಡು ನಡೆಸುವ ನಿಯಮವನ್ನೇ ಮುಂದುವರಿಸಲಾಗಿದೆ.
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
No comments: