ರೊಟ್ಟಿ ತಟ್ಟುತ್ತಿರುವ ಈ ಹುಡುಗಿಯ ಮಂದಹಾಸಕ್ಕೆ ಫಿದಾ ಆದ ನೆಟ್ಟಿಗರು: ವೈರಲ್ ಆಯ್ತು ವಿಡಿಯೋ​..!

ಇನ್​ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಶೇರ್ ಮಾಡಲಾಗಿರುವ ವಿಡಿಯೋವೊಂದು ಇದೀಗ ಇಂಟರ್​ನೆ ಟ್​​ನಲ್ಲಿ ಭಾರಿ ವೈರಲ್ ಆಗುತ್ತಿದೆ. ಮುಗ್ಧ ನೋಟ ಹಾಗೂ ಸುಂದರವಾದ ನಗುವಿನ ಹದಿಹರೆಯದ ಯುವತಿಯೊಬ್ಬಳು ರೊಟ್ಟಿ ತಟ್ಟುತ್ತಾ ಸಂತೋಷವಾಗಿರುವ ವಿಡಿಯೋ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಇಂದಿನ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣ ಅದೆಷ್ಟು ಶಕ್ತಿಶಾಲಿಯಾಗಿದೆ ಎಂದರೆ ಒಂದೇ ದಿನದಲ್ಲಿ ಎಲೆಮರೆ ಕಾಯಿಯಂತಿರುವ ವ್ಯಕ್ತಿ ರಾತರೋರಾತ್ರಿ ಪ್ರಸಿದ್ಧವಾಗಬಹುದು. ಖ್ಯಾತ ವ್ಯಕ್ತಿಯೂ ಒಂದೇ ದಿನದಲ್ಲಿ ಅಪಖ್ಯಾತಿಗೆ ಗುರಿಯಾಗಬಹುದು. ತಮ್ಮ ವಿಡಿಯೋಗಳ ಮೂಲಕ ಜನಸಾಮಾನ್ಯರೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪ್ರಖ್ಯಾತರಾದ ಅನೇಕ ಮಂದಿಯನ್ನು ನಾವು ಹಿಂದೆ ಕಂಡಿದ್ದೇವೆ. ಜಿಯಾ ಅಲಿ ಎಂಬ ಫೋಟೋಗ್ರಾಫರ್‌ನ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದ ನೀಲಿ ಕಣ್ಣಿನ ಅರ್ಷದ್ ಖಾನ್ ಎಂಬ ಚಹಾ ಮಾರುವ ಹುಡುಗ ಮುಂದೆ ಮಾಧ್ಯಮಗಳ ಹೆಡ್ ಲೈನ್ ಗಳಲ್ಲಿ ರಾರಾಜಿಸಿ ಇಸ್ಲಾಮಾಬಾದಿನಲ್ಲಿ ಮಾಡೆಲ್ ಆಗಿದ್ದು ಈಗ ಇತಿಹಾಸ. ಆ ನಂತರ ಆತ ಅನೇಕ ಮಾಡೆಲಿಂಗ್ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿ ಮಿಂಚಿದ್ದು, ಮಿಂಚುತ್ತಿರುವುದು ಗಮನಾರ್ಹ.
ಯಶ್‍ ರಾಜ್ ಮುಖಾಟೆ ಇಂಥದ್ದೇ ಜನಪ್ರಿಯತೆ ಪಡೆದ ಇನ್ನೊಬ್ಬ ಯುವಕ. ಆತ ಜನಪ್ರಿಯ ಹಿಂದಿ ಧಾರಾವಾಹಿ ‘ಸಾಥ್ ನಿಭಾನಾ ಸಾಥಿಯಾ’ದ ಕೋಕಿಲಾ ಬೆನ್ ಅವರ ಸಂಭಾಷಣೆಯನ್ನು ತಮ್ಮದೇ ಶೈಲಿಯಲ್ಲಿ ಹೇಳುವುದನ್ನು ವಿಡಿಯೋ ಮಾಡಿದ್ದರು. ಅದೆಷ್ಟು ಜನಪ್ರಿಯವಾಯಿತು ಎಂದರೆ ಜನರು ಮುಖಾಟೆ ಶೈಲಿಯ ಸಂಭಾಷಣೆಯನ್ನೇ ಗುನುಗಲು ಆರಂಭಿಸಿದ್ದರು.

ಮುಗ್ಧ ಹುಡುಗಿಯ ರೊಟ್ಟಿ ತಟ್ಟುವ ವಿಡಿಯೋ ಜನಪ್ರಿಯ

ಇನ್​ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಶೇರ್ ಮಾಡಲಾಗಿರುವ ವಿಡಿಯೋವೊಂದು ಇದೀಗ ಇಂಟರ್​ನೆ ಟ್​​ನಲ್ಲಿ ಭಾರಿ ವೈರಲ್ ಆಗುತ್ತಿದೆ. ಮುಗ್ಧ ನೋಟ ಹಾಗೂ ಸುಂದರವಾದ ನಗುವಿನ ಹದಿಹರೆಯದ ಯುವತಿಯೊಬ್ಬಳು ರೊಟ್ಟಿ ತಟ್ಟುತ್ತಾ ಸಂತೋಷವಾಗಿರುವ ವಿಡಿಯೋ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.


ವಿಡಿಯೋದಲ್ಲಿ ಆ ಬಡ ಕುಟುಂಬದ ಯುವತಿ ರೊಟ್ಟಿ ತಟ್ಟುತ್ತಿದ್ದಾರೆ. ಸಂತೋಷವಾಗಿದ್ದಾರೆ ಮತ್ತು ಸುಲಲಿತವಾಗಿ ತನ್ನ ಕೆಲಸವನ್ನು ಮಾಡುತ್ತಿದ್ದಾರೆ. ಆಕೆ ತಟ್ಟುತ್ತಿರುವ ರೊಟ್ಟಿಯ ಮೇಲೆ ನೋಡುಗರ ಗಮನ ಹೋಗುತ್ತದೋ ಇಲ್ಲವೇ ಸುಂದರವಾಗಿರುವ ಆ ಯುವತಿಯ ಮುಖದ ಮೇಲೆ ಗಮನ ಕೇಂದ್ರೀಕೃತವಾಗುತ್ತದೋ ಎನ್ನುವುದು ಅವರವರ ಭಾವ ಹಾಗೂ ಭಕ್ತಿಗೆ ಬಿಟ್ಟಿದ್ದು
ಆದರೆ ಬಡತನ ಎದ್ದು ಕಾಣುತ್ತಿದ್ದರೂ ಖುಷಿಯಾಗಿ ಲವಲವಿಕೆಯಿಂದ ತನ್ನ ಕೆಲಸ ಮಾಡುತ್ತಿರುವ, ಆಕೆಯ ಹಿಂದೆ ತಮ್ಮ ಪಾಡಿಗೆ ತಾವು ಆಟವಾಡುತ್ತಿರುವ ಮಕ್ಕಳು, ಬೀದಿ ನಾಯಿಗಳ ಓಡಾಟ, ಗ್ರಾಮೀಣ ಭಾಗದ ಹಿನ್ನೆಲೆಯ ದೃಶ್ಯವನ್ನು ಒಳಗೊಂಡ ಈ ವಿಡಿಯೋ ಯಾರಿಗಾದರೂ ಒಂದು ಸಲ ಮುದ ನೀಡದಿರದು.

ಈ ವಿಡಿಯೋದಲ್ಲಿರುವ ಹುಡುಗಿಯ ಹೆಸರು, ಆಕೆ ಎಲ್ಲಿಯವಳು ಎಂಬಿತ್ಯಾದಿ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಆಕೆಯ ವಿಡಿಯೋ ಪೋಸ್ಟ್ ಮಾಡಲಾದ ಇನ್​ಸ್ಟಾಗ್ರಾಂ ಖಾತೆಯಲ್ಲಿ 96.4 ಸಾವಿರ ಹಿಂಬಾಲಕರಿದ್ದಾರೆ. ಈ ವಿಡಿಯೋ ಅಂತೂ ದೊಡ್ಡ ಮಟ್ಟದಲ್ಲಿ ಇಂಟರ್​ನೆಟ್​ನಲ್ಲಿ ವೈರಲ್ ಆಗಿಬಿಟ್ಟಿದೆ. ವಿಡಿಯೋದಲ್ಲಿರುವ ಹುಡುಗಿಗೆ ಪ್ರಶಂಸೆಯ ಸುರಿಮಳೆಯೇ ಆಗುತ್ತಿದೆ.


No comments:

Powered by Blogger.
google.com, pub-6640921760405904, DIRECT, f08c47fec0942fa0